ಸಿದ್ಧಾರ್ಥ ಅರಕೇರಿಯವರು ವಿಜಯಪುರ ಜಿಲ್ಲೆಯ ಮಾಜಿ ಶಾಸಕ. == ಪರಿಚಯ == ಅರಕೇರಿಯವರು 3ನೇ ಏಪ್ರಿಲ್ 1940ರಂದು ವಿಜಯಪುರ ಜಿಲ್ಲೆಯ ವಿಜಯಪುರ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ಜನಿಸಿದರು. == ಶಿಕ್ಷಣ == ಅರಕೇರಿಯವರು ಕಾನೂನು ಪದವಿ ಪಡೆದಿದ್ದಾರೆ. == ರಾಜಕೀಯ == ೧೯೬೭ರಲ್ಲಿ ಬಳ್ಳೊಳ್ಳಿ ವಿಧಾನಸಭಾ ಕ್ಷೇತ್ರ (ಈಗಿನ ನಾಗಠಾಣ ವಿಧಾನಸಭಾ ಕ್ಷೇತ್ರ)ದಿಂದ ಆರ್.ಪಿ.ಐ(ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ) ಪಕ್ಷದಿಂದ ಆಯ್ಕೆಯಾಗಿದ್ದರು. ೧೯೭೮ರಲ್ಲಿ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. == ಪ್ರಶಸ್ತಿಗಳು == ೨೦೦೦ - ದಿ ಬೆಸ್ಟ್ ಸಿಟಿಜನ್ ಆಫ್ ಇಂಡಿಯಾ ಅವಾರ್ಡ್ ಪ್ರಶಸ್ತಿ ಲಭಿಸಿದೆ. ೨೦೧೪ - ಬೆಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ೨೦೧೫ - ಡಾ.ಬಿ.ಆರ್.ಅಂಬೇಡ್ಕರ್ ಪ್ರಶಸ್ತಿಯನ್ನು ಕೊಡಲಾಗಿದೆ. ೨೦೧೬ - ಬಸವಶ್ರೀ ಪ್ರಶಸ್ತಿ ಲಭಿಸಿದೆ. == ನಿಧನ == ಸಿದ್ಧಾರ್ಥ ಅರಕೇರಿಯವರು ೨೪ನೇ ಏಪ್ರಿಲ್ ೨೦೧೯ರಲ್ಲಿ ನಿಧನರಾದರು. == ಉಲ್ಲೇಖ ==